ಶಂಸುಲ್ ಉಲಮಾ(ರ)ರ ಕರಾಮತ್

ಕೇರಳದ ಕಣ್ಣೂರು ಜಿಲ್ಲೆಯ ತಳಿಪ್ಪರಂಬ್ ಎಂಬಲ್ಲಿ ಸಮಸ್ತಕ್ಕೆ ಸೇರಿದ ಮದ್ರಸವೊಂದನ್ನು ಕೆಲವು ಕುತಂತ್ರಗಾರರು ತಮ್ಮ ಕೈವಶಪಡಿಸಿಕೊಳ್ಳಲು ಮುಂದಾದಾಗ, ಓರ್ವ ತಂಙಳ್ ಮತ್ತು ಇನ್ನೋರ್ವ ವ್ಯಕ್ತಿಯು ವಕೀಲನ ಮೊರೆ ಹೋದರು. ಆದರೆ ವಕೀಲ ಈ ಕೇಸನ್ನು ಕೈಗೆತ್ತಿಕೊಳ್ಳಲು ತಯಾರಾಗಲಿಲ್ಲ.ನಯವಾಗಿ ತಿರಸ್ಕರಿಸಿದ. ಇದರಿಂದ ಬೇಸತ್ತ ತಂಙಳ್ ಮತ್ತು ಜೊತೆಗಾರ ವ್ಯಕ್ತಿ ಅನ್ಯ ದಾರಿ ಕಾಣದೆ ಹಿಂದಿರುಗಿ ಬಂದರು. ಆದರೆ ಆ ದಿನ ರಾತ್ರಿಯಲ್ಲಿ ಈ ವಕೀಲನ ಮುಂದೆ ಬಿಳಿ ವಸ್ತ್ರಗಳನ್ನು ಧರಿಸಿ,ತಲೆಗೆ ಮುಂಡಾಸು ಕಟ್ಟಿ, ಕೈಯಲ್ಲೊಂದು ಕೋಲು ಹಿಡಿದುಕೊಂಡಿರುವ ವ್ಯಕ್ತಿಯೊಬ್ಬರು ಪ್ರತ್ಯಕ್ಷರಾಗಿ ಇಂಗ್ಲಿಷ್ ಭಾಷೆಯಲ್ಲಿ, "ಆ ಕೇಸನ್ನು ನೀವು ಕೈಗೆತ್ತಿಕೊಳ್ಳಬೇಕು, ನೀವು ಖಂಡಿತಾ ಜಯಿಸುವಿರಿ" ಎಂದರು. ಗಾಬರಿಗೊಂಡ ವಕೀಲ ತನ್ನ ಹಾಸಿಗೆಯಿಂದ ಎದ್ದು ಪತ್ನಿಯನ್ನು ಕರೆದೆಬ್ಬಿಸಿ, "ಈಗ ಇಲ್ಲಿಗೆ ಯಾರಾದರೂ ಬಂದಿದ್ದನ್ನು ಕಂಡಿದ್ದೀಯಾ?" ಎಂದು ಕೇಳಿದರು. ಪತ್ನಿ "ಇಲ್ಲ" ಎಂದುತ್ತರಿಸಿದರು. ವಕೀಲ ಮತ್ತೆ ನಿದ್ರಿಸಲು ಹೊರಟರು, ಕಣ್ಣು ಮುಚ್ಚುವಷ್ಟರಲ್ಲಿ ಮತ್ತೆ ಅದೇ ವ್ಯಕ್ತಿ ಬಂದು ಮೊದಲು ಹೇಳಿದ ಮಾತನ್ನೇ ಹೇಳಿದರು. ಭಯಗೊಂಡ ವಕೀಲ, ಪುನಃ ಪತ್ನಿಯನ್ನು ಕರೆದು, "ಸರಿಯಾಗಿ ನೋಡು ಯಾರಾದರೂ ಒಳಗೆ ಇದ್ದಾರೆಯೇ" ಎಂದು ಕೇಳಿದರು. ಯಾರು ಕೂಡ ಕಾಣಿಸಲಿಲ್ಲ. ಮಗದೊಮ್ಮೆ ನಿದ್ರೆಗೆ ಜಾರಲು ಅಣಿಯಾಗಿ ಕಣ್ಣು ಮುಚ್ಚುವಷ್ಟರ...