ಶಂಸುಲ್ ಉಲಮಾ(ರ)ರ ಕರಾಮತ್

   ಕೇರಳದ ಕಣ್ಣೂರು ಜಿಲ್ಲೆಯ ತಳಿಪ್ಪರಂಬ್ ಎಂಬಲ್ಲಿ ಸಮಸ್ತಕ್ಕೆ ಸೇರಿದ ಮದ್ರಸವೊಂದನ್ನು ಕೆಲವು ಕುತಂತ್ರಗಾರರು ತಮ್ಮ ಕೈವಶಪಡಿಸಿಕೊಳ್ಳಲು ಮುಂದಾದಾಗ, ಓರ್ವ ತಂಙಳ್ ಮತ್ತು ಇನ್ನೋರ್ವ ವ್ಯಕ್ತಿಯು ವಕೀಲನ ಮೊರೆ ಹೋದರು. ಆದರೆ ವಕೀಲ ಈ ಕೇಸನ್ನು ಕೈಗೆತ್ತಿಕೊಳ್ಳಲು ತಯಾರಾಗಲಿಲ್ಲ.ನಯವಾಗಿ ತಿರಸ್ಕರಿಸಿದ. ಇದರಿಂದ ಬೇಸತ್ತ ತಂಙಳ್ ಮತ್ತು ಜೊತೆಗಾರ ವ್ಯಕ್ತಿ ಅನ್ಯ ದಾರಿ ಕಾಣದೆ ಹಿಂದಿರುಗಿ ಬಂದರು. ಆದರೆ ಆ ದಿನ ರಾತ್ರಿಯಲ್ಲಿ ಈ ವಕೀಲನ ಮುಂದೆ ಬಿಳಿ ವಸ್ತ್ರಗಳನ್ನು ಧರಿಸಿ,ತಲೆಗೆ ಮುಂಡಾಸು ಕಟ್ಟಿ, ಕೈಯಲ್ಲೊಂದು ಕೋಲು ಹಿಡಿದುಕೊಂಡಿರುವ ವ್ಯಕ್ತಿಯೊಬ್ಬರು ಪ್ರತ್ಯಕ್ಷರಾಗಿ ಇಂಗ್ಲಿಷ್ ಭಾಷೆಯಲ್ಲಿ, "ಆ ಕೇಸನ್ನು ನೀವು ಕೈಗೆತ್ತಿಕೊಳ್ಳಬೇಕು, ನೀವು ಖಂಡಿತಾ ಜಯಿಸುವಿರಿ" ಎಂದರು. ಗಾಬರಿಗೊಂಡ ವಕೀಲ ತನ್ನ ಹಾಸಿಗೆಯಿಂದ ಎದ್ದು ಪತ್ನಿಯನ್ನು ಕರೆದೆಬ್ಬಿಸಿ, "ಈಗ ಇಲ್ಲಿಗೆ ಯಾರಾದರೂ ಬಂದಿದ್ದನ್ನು ಕಂಡಿದ್ದೀಯಾ?" ಎಂದು ಕೇಳಿದರು. ಪತ್ನಿ "ಇಲ್ಲ" ಎಂದುತ್ತರಿಸಿದರು. ವಕೀಲ ಮತ್ತೆ ನಿದ್ರಿಸಲು ಹೊರಟರು, ಕಣ್ಣು ಮುಚ್ಚುವಷ್ಟರಲ್ಲಿ ಮತ್ತೆ ಅದೇ ವ್ಯಕ್ತಿ ಬಂದು ಮೊದಲು ಹೇಳಿದ ಮಾತನ್ನೇ ಹೇಳಿದರು. ಭಯಗೊಂಡ ವಕೀಲ, ಪುನಃ ಪತ್ನಿಯನ್ನು ಕರೆದು, "ಸರಿಯಾಗಿ ನೋಡು ಯಾರಾದರೂ ಒಳಗೆ ಇದ್ದಾರೆಯೇ" ಎಂದು ಕೇಳಿದರು. ಯಾರು ಕೂಡ ಕಾಣಿಸಲಿಲ್ಲ. ಮಗದೊಮ್ಮೆ ನಿದ್ರೆಗೆ ಜಾರಲು ಅಣಿಯಾಗಿ ಕಣ್ಣು ಮುಚ್ಚುವಷ್ಟರಲ್ಲಿ ಎರಡು ಸಲ ನಡೆದ ಘಟನೆ ಮರುಕಳಿಸಿತು. ಆಶ್ಚರ್ಯಗೊಂಡ ವಕೀಲ, ಅದೇ ರಾತ್ರಿಯಲ್ಲಿ ಮನೆಯಿಂದ ಹೊರಟು ಸೀದಾ ತಂಙಳ್ ರವರ ಮನೆ ಬಾಗಿಲಿನ ಕದ ಬಡಿದರು. ಬಾಗಿಲು ತೆರೆದ ತಂಙಳ್ ಮನೆಯವರು, ಈ ರಾತ್ರಿಯಲ್ಲಿ ತಾವೇಕೆ ಬಂದಿದ್ದೀರಿ? ಎಂದು ಪ್ರಶ್ನಿಸಿದರು. ವಕೀಲ, ನಡೆದ ದೃಶ್ಯಗಳನ್ನೆಲ್ಲಾ ಬಿಡಿ ಬಿಡಿಯಾಗಿ ವಿವರಿಸಿ ಹೇಳಿದರು. ಹಾಗೂ ತಮ್ಮ ಮದ್ರಸದ ಕೇಸನ್ನು ನಾನೇ ತೆಗೆದುಕೊಳ್ತೀನಿ ಅಂಥ ಹೇಳಿದರು. ಈ ಕೇಸಿನಲ್ಲಿ ವಿಜಯ ಸಮಸ್ತದ ಮಡಿಲಿಗೆ ಬಂತು. ತದನಂತರ ವಕೀಲನಿಗೆ ಸಮಸ್ತದ ನೇತಾರರು ಹಲವು ಫೋಟೋಗಳನ್ನು ತೋರಿಸುತ್ತಾ, ಇವರಲ್ಲಿ ಯಾರಾದರೂ ಇದ್ದಾರೆಯೇ ತಮಗೆ ಕಂಡ ವ್ಯಕ್ತಿ ಎಂದು ಕೇಳಿದರು. ಹಲವಾರು ಫೋಟೋಗಳ ಮಧ್ಯದಿಂದ ಒಂದು ಫೋಟೋವನ್ನು ತೋರಿಸಿ ಈ ಮಹಾಮನುಷಿಯೇ ನನಗೆ ಕಾಣಿಸಿದ್ದು ಎಂದರು. ಆ ಮಹಾನ್ ಮನುಷಿ ಯಾರು ಗೊತ್ತೇ? ಶಂಸುಲ್ ಉಲಮಾ ಎಂಬ ಅಮರ ನಾಮದಿಂದ ಅರಿಯಲ್ಪಡುವ ಶೈಖುನಾ ಇ.ಕೆ. ಉಸ್ತಾದ್ (ಖ.ಸಿ)ರವರಾಗಿದ್ದರು. ತಮ್ಮ ಬರ್ಝಖೀ ಲೋಕದಲ್ಲಿಯೂ ಸಮಸ್ತವನ್ನು ಮುನ್ನಡೆಸುತ್ತಿದ್ದಾರೆಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಯಾವುದು? ಇಂತಹ ಒಂದಲ್ಲ, ಸಾವಿರಾರು ಘಟನೆಗಳು ಸಮಸ್ತದ ಪಂಡಿತರಿಗೆ, ಕಾರ್ಯಕರ್ತರಿಗೆ, ಅಭಿಮಾನಿಗಳ ಅನುಭವಕ್ಕೆ ಬಂದಿದೆ. ಎಷ್ಟು ಹೇಳಿದರೂ ಮೆದುಳಿನಲ್ಲಿ ತುಂಬಿಸಿಟ್ಟ ಕೆಸರನ್ನೇ ನಂಬುವವರಿಗೆ ಏನೆನ್ನಬೇಕು.

https://m.facebook.com/story.php?story_fbid=325631521262188&id=100014460285078


Comments

Popular posts from this blog

SYED ABDURAHMAN MUSHAYYAKH (Akatthe Koya Thangal)

A Great Symbol Of Benevolence

هذه مثرّة عن فضيلة الشيخ خاجا معين الدين الجشتي الحسن السنجريّ الأجميريّ(An Arabic Poem About Shaikh Khwaja Moinuddin Chisti, Ajmer(with English translation